ಜನಸ್ಪಂದನ ಟ್ರಸ್ಟ್ನಿಂದ ಪೌರಕಾರ್ಮಿಕರಿಗೆ ಸ್ಯಾನಿಟೈಸರ್ ವಿತರಣೆ - sanitizer distrubuted by janaspandana trust
ಕೊರೊನಾ ಭೀತಿ ನಡುವೆಯೂ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತ ನಗರವನ್ನು ಸ್ವಚ್ಛವಾಗಿಲು ಹಗಲಿರುಳು ಶ್ರಮಿಸುತ್ತಿರುವ ಪೌರ ಕಾರ್ಮಿಕರಿಗೆ ಸ್ಯಾನಿಟೈಸರ್ ಸಾಮಗ್ರಿಗಳನ್ನು ಜನಸ್ಪಂದನ ಟ್ರಸ್ಟ್ ವತಿಯಿಂದ ವಿತರಣೆ ಮಾಡಲಾಯಿತು. ಜಗನ್ಮೋಹನ ಅರಮನೆ ಹೊರಾಂಗಣದಲ್ಲಿ 50ಕ್ಕೂ ಮಂದಿಗೆ ಸ್ಯಾನಿಟೈಸರಿಂಗ್ ಸಾಮಗ್ರಿಗಳನ್ನು ಮಾಜಿ ಶಾಸಕ ವಾಸು ಅವರು ವಿತರಣೆ ಮಾಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಇತಿಹಾಸದಲ್ಲಿ ಇಂತಹ ಕರಾಳ ವೈರಸ್ ಅನ್ನು ನಾನು ನೋಡಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಅಗತ್ಯ ಕ್ರಮಗಳನ್ನು ಸಾರ್ವಜನಿಕರು ಪಾಲಿಸಬೇಕು ಎಂದ್ರು. ಪೌರಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಕೆಲಸದಲ್ಲಿ ತೊಡಗಿದ್ದಾರೆ. ಇವರ ಕಾರ್ಯ ಶ್ಲಾಘನೀಯ ಎಂದರು