ಆರ್.ಆರ್.ನಗರದಲ್ಲಿ ಯಾವುದೇ ಅಡ್ಡಿ ಆತಂಕವಿಲ್ಲದೇ ಸೋಂಕಿತನ ಮತದಾನ - ಉಪಚುನಾವಣೆ
ಬೆಂಗಳೂರು: ಆರ್.ಆರ್.ನಗರದಲ್ಲಿ ನಡೆದ ಉಪಚುನಾವಣೆಯಲ್ಲಿ ಕೊರೊನಾ ಸೋಂಕಿತನೋರ್ವ ಮತಚಲಾಯಿಸಿದ್ದು, ಯಾವುದೇ ಅಡ್ಡಿ ಆತಂಕವಿಲ್ಲದೇ ಮತದಾನ ನಡೆದಿದೆ ಎಂದು ಆರ್.ಆರ್.ನಗರ ಬಿಬಿಎಂಪಿ ಸೀನಿಯರ್ ಹೆಲ್ತ್ ಇನ್ಸ್ ಪೆಕ್ಟರ್ ದಿವ್ಯಾ ಹೇಳಿದರು. ಮತದಾನ ಮಾಡಿದ ಸೋಂಕಿತ ಹೋಂ ಕ್ವಾರಂಟೈನ್ ಆಗಿದ್ದರು. ಅವರ ವೋಟರ್ ಐಡಿ ಪರಿಶೀಲನೆ ನಡೆಸಿ ಬಳಿಕ ವೋಟ್ ಮಾಡಿಸಿದ್ದೇವೆ. ಸಂಜೆ 5 ರಿಂದ 6 ಗಂಟೆವರೆಗೆ ಸೋಂಕಿತನಿಗಾಗಿ ಸಮಯ ನಿಗದಿ ಮಾಡಲಾಗಿತ್ತು. ಈ ವೇಳೆ ಆತ ಬಂದು ಮತ ಚಲಾಯಿಸಿ ಹೋಗಿದ್ದಾನೆ ಎಂದು ತಿಳಿಸಿದರು.