ಕರ್ನಾಟಕ

karnataka

ETV Bharat / videos

ವಿಜಯಪುರದಲ್ಲಿ ಭಾರಿ ಮಳೆ, ರಸ್ತೆ ಸಂಪರ್ಕ ಕಡಿತ - ರಸ್ತೆ ಸಂಪರ್ಕ ಕಡಿತ ವಿಜಯಪುರದ ಇಂಡಿ ತಾಲೂಕಿನ ತಾಂಬಾ

By

Published : Oct 19, 2019, 3:05 PM IST

ವಿಜಯಪುರ : ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹಳ್ಳದ ನೀರು ರಸ್ತೆಗಳಿಗೆ ನುಗ್ಗಿದ ಪರಿಣಾಮ ಇಂಡಿ ತಾಲೂಕಿನ ತಾಂಬಾ ಹಾಗೂ ಕೆಂಗನಾಳ ಮದ್ಯೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇಂಡಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಧಾರಕಾರವಾಗಿ ಮಳೆ ಸುರಿದರೆ ಮರಿಹಳ್ಳದ ನೀರು ರಸ್ತೆಗೆ ನುಗ್ಗುತ್ತದೆ. ತಾಂಬಾದಿಂದ ಹೋಗುತ್ತಿದ ಸರ್ಕಾರಿ ಬಸ್ ಸಂಚಾರ ಸಂಪೂರ್ಣವಾಗಿ ಕಡಿತಗೊಂಡ ಪರಿಣಾಮವಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ‌. ಮಳೆ ಬಂದಿದ್ದರಿಂದ ಶಿರಕನಳ್ಳಿ, ಹೊನ್ನಳ್ಳಿ ಮಾರ್ಗವು ಸ್ಥಗಿತಗೊಂಡಿದೆ. ಹಳ್ಳದ ನೀರು ಬಂದಾಗಲೆಲ್ಲಾ ತಗ್ಗು ಪ್ರದೇಶದಲ್ಲಿರುವ ರಸ್ತೆಗಳು ಮುಳುಗಡೆ ಆಗುತ್ತಿವೆ. ಇಂದು ಸಂಜೆ‌ ವೇಳೆಗೆ ನೀರಿನ ಪ್ರಮಾಣ ಕಡಿಮೆಯಾಗುವ‌ ಸಾಧ್ಯತೆಯಿದ್ದು, ಸೇತುವೆ ನಿರ್ಮಿಸಲು ಈ ಭಾಗದ ಜನರು ಆಗ್ರಹಿಸುತ್ತಿದ್ದಾರೆ.

ABOUT THE AUTHOR

...view details