ಐದು ವರ್ಷದ ಬಾಲಕನಿಂದ ರಂಜಾನ್ ವ್ರತಾಚರಣೆ.. - ramjan
ಮುಸ್ಲಿಂ ಸಮುದಾಯಕ್ಕೆ ರಂಜಾನ್ ಮಾಸ ಬಹಳ ಪವಿತ್ರ. ಆದರೆ, ಲಾಕ್ಡೌನ್ ಹಿನ್ನೆಲೆ ಎಲ್ಲರೂ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸುವುದರ ಜೊತೆಗೆ ಉಪವಾಸ ಮಾಡುತ್ತಿದ್ದಾರೆ. ಹುಬ್ಬಳ್ಳಿ ನಗರದ ಬಾಣತಿಕಟ್ಟೆಯಲ್ಲಿ 5 ವರ್ಷದ ಚಿಕ್ಕ ಬಾಲಕ ಮಹಮ್ಮದ್ ಫರ್ಹಾನ್ ಜಮಾದಾರ ಎಂಬಾತ ರೋಜಾ ಆಚರಿಸುವ ಮೂಲಕ ಗಮನ ಸೆಳೆದಿದ್ದಾನೆ. ಜೊತೆಗೆ ಮನೆಯಲ್ಲಿಯೇ ನಮಾಜ್ ಮಾಡುವ ಮೂಲಕ ಮನೆಯಿಂದ ಯಾರೂ ಹೊರ ಬರಬೇಡಿ ಎಂದು ಕೊರೊನಾ ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸಿದ್ದಾನೆ.