ಹಥ್ರಾಸ್ ಅತ್ಯಾಚಾರ ಖಂಡಿಸಿ ಯೋಗಿ ಭಾವಚಿತ್ರಕ್ಕೆ ಬೆಂಕಿ - ಹಥ್ರಾಸ್ ಅತ್ಯಾಚಾರ ಖಂಡಿಸಿ ಯೋಗಿ ಭಾವಚಿತ್ರಕ್ಕೆ ಬೆಂಕಿ
ಶಿವಮೊಗ್ಗ: ಉತ್ತರ ಪ್ರದೇಶದ ಹಥ್ರಾಸ್ನಲ್ಲಿ ನಡೆದ ಅತ್ಯಾಚಾರ ಖಂಡಿಸಿ ಜಿಲ್ಲಾ ಕಾಂಗ್ರೆಸ್ ನಿಂದ ಪಂಜಿನ ಮೇರವಣಿಗೆ ಹಾಗೂ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಭಾವಚಿತ್ರಕ್ಕೆ ನಗರದ ಗೋಪಿ ವೃತ್ತದಲ್ಲಿ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ನಗರದ ಅಮೀರ ಅಹ್ಮದ್ ಸರ್ಕಲ್ನಿಂದ ಗೋಪಿವೃತ್ತದವರೆಗೂ ಪಂಚಿನ ಮೇರವಣಿ ಮಾಡುವ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.