ದಾವಣೆಗೆರೆಯಲ್ಲಿ ಮೊದಲ ಹಂತದ ಕೋವ್ಯಾಕ್ಸಿನ್ ನೀಡಲು ಸಿದ್ಧತೆ
ಕೊರೊನಾ ಲಸಿಕೆ ದಾವಣಗೆರೆಯ ಲಸಿಕಾ ಕೇಂದ್ರದಲ್ಲಿ ಭದ್ರವಾಗಿದ್ದು, ಕೋವ್ಯಾಕ್ಸಿನ್ ನೀಡಲು ಸಿದ್ಧತೆ ನಡೆದಿದೆ. ಚಿತ್ರದುರ್ಗದಿಂದ ದಾವಣಗೆರೆ ಬಂದಿರುವ ಕೊರೊನಾ ಲಸಿಕೆಯನ್ನು ಮೊದಲ ಹಂತದಲ್ಲಿ 19,070 ಕೊರೊನಾ ವಾರಿಯರ್ಸ್ಗಳಿಗೆ ಕೊರೊನಾ ಲಸಿಕೆ ನೀಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಬಳಿಕ ಕಂದಾಯ ಇಲಾಖೆ, ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಕೊರೊನಾ ಕೋವ್ಯಾಕ್ಸಿನ್ ನೀಡಲಿದ್ದಾರೆ. ಇಂದು ನಗರದ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿರುವ ಲಸಿಕೆ ಕೇಂದ್ರದಲ್ಲಿ ಲಸಿಕೆ ನೀಡಲು ಸಿದ್ಧತೆ ನಡೆಸಲಾಗಿದೆ. ಬಳಿಕ ಜಿಲ್ಲೆಯ 36 ಕೇಂದ್ರಗಳ ಪೈಕಿ 07 ಕೇಂದ್ರಗಳಲ್ಲಿ ಲಸಿಕೆ ಸಿಗಲಿದೆ.