ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ಡಿಜಿಪಿ ಪ್ರವೀಣ್ ಸೂದ್ - Mysore news
ಮೈಸೂರು: ಸುತ್ತೂರು ಮಠದ ಪೀಠಾಧಿಪತಿ ಡಾ.ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳಿಂದ ರಾಜ್ಯ ಪೊಲೀಸ್ ಇಲಾಖೆಯ ಮಹಾ ನಿರ್ದೇಶಕ ಪ್ರವೀಣ್ ಸೂದ್ ಆಶೀರ್ವಾದ ಪಡೆದರು. ನಂಜನಗೂಡು ತಾಲೂಕಿನ ಸುತ್ತೂರು ಶ್ರೀ ಕ್ಷೇತ್ರಕ್ಕೆ ಪತ್ನಿಯೊಂದಿಗೆ ಆಗಮಿಸಿದ ಸೂದ್ ಅವರು ಸ್ವಾಮೀಜಿಗಳ ಕುಶಲೋಪರಿ ವಿಚಾರಿಸಿದರು. ಇದೇ ವೇಳೆ ಕೆಲ ವರ್ಷಗಳ ಹಿಂದೆ ಮೈಸೂರು ನಗರ ಪೊಲೀಸ್ ಆಯುಕ್ತರಾಗಿದ್ದನ್ನು ಸೂದ್ ನೆನಪಿಸಿಕೊಂಡರು. ಇಂದು ಸಂಜೆ ಅವರು ನೂತನ ಪೊಲೀಸ್ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.