ಬಳ್ಳಾರಿಯಲ್ಲಿ ರಸ್ತೆಗಿಳಿದವರಿಗೆ ಪೊಲೀಸರಿಂದ ವಾರ್ನಿಂಗ್.. ! - police officerce warning
ಬಳ್ಳಾರಿ: ಇಡೀ ಭಾರತ ಮತ್ತು ಕರ್ನಾಟಕವೇ ಏಪ್ರಿಲ್ 14 ರವರೆಗೆ ಲಾಕ್ ಡೌನ್ ಆದ್ರೂ ಸಹ ಬಳ್ಳಾರಿ ಗ್ರಾಮಾಂತರ ಪ್ರದೇಶವಾದ ಕೌಲ್ ಬಜಾರ್ ಸಾರ್ವಜನಿಕರು ಮಾತ್ರ ರಸ್ತೆಯಲ್ಲಿ ಬೈಕ್ಗಳಲ್ಲಿ ಸಂಚರಿಸುತ್ತಿದ್ದು, ಇದನ್ನು ಗಮನಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ರಸ್ತೆಯಲ್ಲಿಯೇ ಲಾಟಿ ರುಚಿ ತೋರಿಸಿ ಮತ್ತೆ ರಸ್ತೆಗೆ ಬರಬಾರದು ಎಂದು ಹೇಳಿ ಕಳಿಸಿದರು. ಇನ್ನು ವೈದ್ಯಕೀಯ ಇಲಾಖೆ, ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ ಮತ್ತು ಮಾಧ್ಯಮದವರಿಗೆ ಮಾತ್ರ ಅನುಮತಿ ನೀಡಿದರು.