ನಿರ್ಗತಿಕ ವೃದ್ಧೆಗೆ ಆಹಾರ,ಮಾಸ್ಕ್ ವಿತರಿಸಿ ಮಾನವೀಯತೆ ಮೆರೆದ ಪೊಲೀಸ್ ಇನ್ಸ್ಪೆಕ್ಟರ್
ಕೊರೊನಾ ಹಿನ್ನೆಲೆಯಲ್ಲಿ ಭಾರತವೇ ಬಂದ್ ಆಗಿದ್ದು ನಿರ್ಗತಿಕರು ಕೆಲವೆಡೆ ಊಟವಿಲ್ಲದೇ ಪರದಾಡುವ ಪರಿಸ್ಥಿತಿ ಇದೆ. ರೋಣ ಪಟ್ಟಣದ ಪಿಎಸ್ಐ ಪರಮೇಶ್ವರ ಕವಟಗಿ ಅವರು ರಸ್ತೆಯ ಪಕ್ಕ ನಿಂತಿದ್ದ ನಿರ್ಗತಿಕ ವೃದ್ಧೆಗೆ ಬನ್ ಹಾಗೂ ಮಾಸ್ಕ್ ವಿತರಿಸಿ ಮಾನವಿಯತೆ ಮೆರೆದಿದ್ದಾರೆ.