ಉಕ್ಕಿ ಹರಿಯುತ್ತಿದ್ದ ಸೇತುವೆ ದಾಟಿ ಗ್ರೇಟ್ ಎಸ್ಕೇಪ್ ಆದ ಪೊಲೀಸ್ - flood in raichur
ರಾಯಚೂರು : ಅಪಾಯದ ಮಟ್ಟ ಮೀರಿ ಕೃಷ್ಣಾ ನದಿ ನೀರು ಹರಿಯುತ್ತಿದೆ. ಸಾರ್ವಜನಿಕರು ಅಪಾಯವಿರುವ ಸೇತುವೆ, ಮತ್ತು ನದಿಗಿಳಿಯದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮುನ್ಸೂಚನೆ ನೀಡಿದೆ. ಜಿಲ್ಲೆಯ ಲಿಂಗಸುಗೂರು ತಾಲೂಕಿನ ಜಲದುರ್ಗ ಸೇತುವೆಗೆ ನಾರಾಯಣಪುರ ಜಲಾಶಯದಿಂದ ಬೆಳಗ್ಗೆ 5.5 ಲಕ್ಷ ಕ್ಯೂಸೆಕ್ ನೀರಿ ಹರಿದು ಬಿಟ್ಟ ಪರಿಣಾಮ ಸಂಪೂರ್ಣವಾಗಿ ಮುಳುಗಡೆಗೊಂಡಿದೆ. ಇದರಿಂದ ಸೇತುವೆ ಮೇಲೆ ಓಡಾಡುವುದು ಅಪಾಯ. ಆದ್ರೆ ಲಿಂಗಸೂಗೂರು ಡಿವೈಎಸ್ಪಿ ಹರೀಶ್ ಅದ್ಯಾವುದನ್ನ ಲೆಕ್ಕಿಸದೇ ಸೇತುವೆ ದಾಟುವ ಮೂಲಕ ಗ್ರೇಟ್ ಎಸ್ಕೇಪ್ ಆಗಿದ್ದಾರೆ.
Last Updated : Aug 10, 2019, 7:51 PM IST