ಕರ್ನಾಟಕ

karnataka

ETV Bharat / videos

ಮೀನು ಖರೀದಿಗೆ ಮುಗಿಬಿದ್ದ ಶಿವಮೊಗ್ಗ ಜನತೆ - shimogga corona news

By

Published : Apr 25, 2021, 11:59 AM IST

ಶಿವಮೊಗ್ಗ: ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಕೂಡ ಜನರು ಮಾತ್ರ ಯಾವುದಕ್ಕೂ ಭಯ ಪಡದೆ ಮೀನು ಖರೀದಿಗೆ ಮುಗಿಬಿದ್ದಿದ್ದರು. ನಗರದ ಲಷ್ಕರ್ ಮೊಹಲ್ಲಾದಲ್ಲಿರುವ ಮೀನು ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಾಗಿತ್ತು. ಇಂದು ಮಹಾವೀರ ಜಯಂತಿ ಹಿನ್ನೆಲೆ ಮಾಂಸ ಮಾರಾಟವನ್ನು ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಂದ್​​ ಮಾಡಲಾಗಿದೆ. ವಿಕೆಂಡ್​​​ ಕರ್ಫ್ಯೂ ಇರುವ ಹಿನ್ನೆಲೆ ಅಗತ್ಯ ವಸ್ತುಗಳ ಮಾರಾಟಕ್ಕೆ ಹತ್ತು ಗಂಟೆಯವರೆಗೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದಾಗಿ ಮೀನು ಮಾರುಕಟ್ಟೆಯಲ್ಲಿ ಜನಜಂಗುಳಿ ಹೆಚ್ಚಾಗಿತ್ತು. ನಂತರ ಪೊಲೀಸರು ಜನರನ್ನು ಚದುರಿಸಿದರು.

ABOUT THE AUTHOR

...view details