ಕೋಟೆನಾಡಿನಲ್ಲಿ ಬಸ್ಗಾಗಿ ಕಿ.ಮೀ ಉದ್ದ ಕ್ಯೂ ನಿಂತ ಜನರು - ಕೋಟೆನಾಡಿನಲ್ಲಿ ಬಸ್ಗಾಗಿ ಕಿ.ಮೀ ಉದ್ದ ಕ್ಯೂ ನಿಂತ ಜನರು
ಚಿತ್ರದುರ್ಗ: 55 ದಿನಗಳ ಬಳಿಕ ಸಂಚಾರ ಆರಂಭಿಸಿದ ಕೆಎಸ್ಆರ್ಟಿಸಿ ಬಸ್ನಿಂದಾಗಿ ಸಾಕಷ್ಟು ಜನರಿಗೆ ತಮ್ಮ ಊರುಗಳಿಗೆ ತೆರಳಲು ಅನುಕೂಲವಾಗಿದೆ. ಎರಡನೇ ದಿನವಾದ ಇಂದು ಅಂತರ್ ಜಿಲ್ಲೆಗೆ ಸಾರಿಗೆ ಸಂಚಾರ ಆರಂಭವಾದ ಹಿನ್ನೆಲೆಯಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳಲು ಚಿತ್ರದುರ್ಗದ ಕೇಂದ್ರ ಬಸ್ ನಿಲ್ದಾಣದ ಮುಂದೆ ಪ್ರಯಾಣಿಕರು ಬಸ್ಗಾಗಿ ಕಿಲೋ ಮೀಟರ್ ಗಟ್ಟಲೇ ಕ್ಯೂನಲ್ಲಿ ನಿಂತಿರುವ ದೃಶ್ಯ ಕಂಡು ಬಂದಿತು. ಬೇರೆ ಜಿಲ್ಲೆಗಳಿಗೆ ತೆರಳಲು ಬೆಳಗ್ಗೆಯಿಂದಲೇ ಲಗೇಜ್ ಸಮೇತ ಬಸ್ ನಿಲ್ದಾಣಕ್ಕೆ ಆಗಮಿಸಿರುವ ಜನರು ಸಾಲಿನಲ್ಲಿ ನಿಂತು ಸ್ಕ್ರೀನಿಂಗ್ ಮಾಡಿಸಿಕೊಳ್ಳುವ ಮೂಲಕ ತಮ್ಮ ಸ್ವಾ ವಿವರವನ್ನು ಬರೆಸಿ ಪ್ರಯಾಣ ಬೆಳಸಿದರು. ಇನ್ನೂ ಕೆಲವರು ಊರುಗಳಿಗೆ ತೆರಳುವ ಭರದಲ್ಲಿ ಸಾಮಾಜಿಕ ಅಂತರವನ್ನೇ ಗಾಳಿಗೆ ತೂರಿದರು.
TAGGED:
chitradurga bus stand news