ನಿರಾಶ್ರಿತರ ಕೇಂದ್ರದಲ್ಲಿ ಪ್ರವಾಹ ಸಂತ್ರಸ್ತರು... ವಿವಿಧ ಸಂಘ-ಸಂಸ್ಥೆಗಳಿಂದ ಸಹಾಯಹಸ್ತ - ನಿರಾಶ್ರಿತರ ಕೇಂದ್ರ
ಮಲ್ಲಪ್ರಭಾ ನದಿ ಪ್ರವಾಹ ಕಡಿಮೆ ಆಗಿದ್ದರೂ, ಮುಳುಗಡೆ ಆಗಿರುವ ಬಾಗಲಕೋಟೆ ಜಿಲ್ಲೆಯ ಕಮತಗಿ ಸಂತ್ರಸ್ತರ ಗೋಳು ಮಾತ್ರ ಕಡಿಮೆ ಆಗುತ್ತಿಲ್ಲ. ಸಂತ್ರಸ್ತರಾದ 150 ಕುಟುಂಬಗಳು ನಿರಾಶ್ರಿತರ ಕೇಂದ್ರದಲ್ಲಿ ವಾಸಿಸುತ್ತಿದ್ದಾರೆ. ಬೇರೆ ಬೇರೆ ಕುಟುಂಬದವರು ಒಂದೆಡೆ ಸೇರಿಕೊಂಡು ಜಿಲ್ಲಾಡಳಿತ ಹಾಗೂ ಇತರ ಸಂಘ ಸಂಸ್ಥೆಗಳು ನೀಡುವ ಆಹಾರ ಸಾಮಗ್ರಿಗಳಿಂದಲೇ ಜೀವನ ಸಾಗಿಸುತ್ತಿದ್ದಾರೆ.