ಸಮಗ್ರ ಕೃಷಿಯಲ್ಲಿ ಮಿಂಚಿದ ಧಾರವಾಡದ ಮಹಿಳೆ.. ರೈತರಿಗೆ ಮಾದರಿಯಾದ 'ಪಾರ್ವತಿ'
ಮಹಿಳೆಯರು ಕಾಲಿಡದ ಕ್ಷೇತ್ರವಿಲ್ಲ, ಅವರು ಕಾಲಿಟ್ಟ ಮೇಲೆ ಅಲ್ಲಿ ಒಂದು ಸಾಧನೆ ಮಾಡುವ ಹಂಬಲ ಹೊಂದಿರುತ್ತಾರೆ. ಹಲವಾರು ಕ್ಷೇತ್ರಗಳಲ್ಲಿ ಇಂದು ಮಹಿಳೆಯರು ಮಿಂಚುತ್ತಿದ್ದಾರೆ. ಅದಕ್ಕೆ ಕೃಷಿ ಕ್ಷೇತ್ರ ಕೂಡಾ ಹೊರತಾಗಿಲ್ಲ. ಅದರಲ್ಲೂ ಸಮಗ್ರ ಕೃಷಿ ಮಾಡಿಕೊಂಡ ಮಹಿಳೆಯೋರ್ವರು ಸ್ವತಃ ಜಮೀನಿನಲ್ಲಿ ತಾವೇ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ.