ಪ್ರವಾಹ ಸಂತ್ರಸ್ತರ ಕಣ್ಣಲ್ಲಿ ನೀರು ತರಿಸುತ್ತಿರುವ ಈರುಳ್ಳಿ ! - ಗದಗ ಈರುಳ್ಳಿ ಬೆಲೆ ಏರಿಕೆ
ಉತ್ತರ ಕರ್ನಾಟಕದ ಜನತೆಗೆ ಅದ್ಯಾರ ವಕ್ರದೃಷ್ಟಿ ಬಿದ್ದಿದೆಯೋ ಗೊತ್ತಿಲ್ಲ. ಗಾಯದ ಮೇಲೆ ಬರೆ ಎಂಬಂತೆ ಒಂದರ ಮೇಲೊಂದು ಸಮಸ್ಯೆ ಎದುರಿಸ್ತಿದ್ದಾರೆ. ಇತ್ತೀಚೆಗೆ ಭೀಕರ ಪ್ರವಾಹಕ್ಕೆ ತತ್ತರಿಸಿ ಹೋಗಿದ್ದ ಜನತೆ ಇದೀಗ ತರಕಾರಿ ಬೆಲೆ ಏರಿಕೆಗೆ ಸುಸ್ತಾಗಿ ಹೋಗಿದ್ದಾರೆ. ರುಚಿ ತರಿಸೋ ಈರುಳ್ಳಿ ಸದ್ಯ ಗ್ರಾಹಕರ ಕಣ್ಣಲ್ಲಿ ನೀರು ತರಿಸ್ತಾ ಇರೋದಂತೂ ಸತ್ಯ.