ವಿಜಯಪುರದಲ್ಲಿ ಉಸಿರುಗಟ್ಟಿಸಿ ವೃದ್ಧೆಯ ಬರ್ಬರ ಕೊಲೆ - vijayapura crime news
ವಿಜಯಪುರ: ಮನೆಯಲ್ಲಿದ್ದ ವೃದ್ಧೆಯನ್ನು ಹಗ್ಗದಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ಸೀರೆಯಿಂದ ಕಟ್ಟಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ನಗರದ ಜನ್ನತ ಹಾಲ್ ಹಿಂಭಾಗದ ಮನೆಯೊಂದರಲ್ಲಿ ನಡೆದಿದೆ. ನರ್ಸ್ ರೇಖಾ ಶಿವಶಂಕರ್ ದೇಶಮಾನೆ (69) ಕೊಲೆಗೀಡಾಗಿರುವ ವೃದ್ಧೆ. ಇನ್ನು ಘಟನಾ ಸ್ಥಳಕ್ಕೆ ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. ಗಾಂಧಿ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Oct 14, 2019, 9:54 PM IST