ಮನುಷ್ಯನ ಅಂತ್ಯ ಸಂಸ್ಕಾರಕ್ಕೂ ಸಿಗುತ್ತಿಲ್ಲ ತುಂಡು ಜಾಗ!
ಮೃತಪಟ್ಟವರ ಅಂತ್ಯಕ್ರಿಯೆ ಗೌರವಯುತವಾಗಿ ನಡೆಯುವುದಕ್ಕೆ ಸೂಕ್ತ ಅವಕಾಶ ಸಮಾಜದಲ್ಲಿ ಇರಬೇಕು. ವಿಪರ್ಯಾಸವೆಂದರೆ ಹಲವೆಡೆ ಶವ ಸಂಸ್ಕಾರ ನಡೆಸಲು ನಿಗದಿತ ಸ್ಥಳ ಇಲ್ಲ. ಸ್ಮಶಾನ ಕೊರತೆಯು ಪ್ರಮುಖ ಸಮಸ್ಯೆಗಳಲ್ಲೊಂದಾಗಿದ್ದು, ಸ್ಥಳೀಯ ಆಡಳಿತಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.