ನಿರ್ಭಯಾ ಹಂತಕರಿಗೆ ಗಲ್ಲು ಶಿಕ್ಷೆ: ಚಿಕ್ಕಬಳ್ಳಾಪುರದಲ್ಲಿ ಜನರ ಸಂಭ್ರಮ
ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿದ ಹಿನ್ನೆಲೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೆಲವರು ಒಟ್ಟುಗೂಡಿ ಸಂಭ್ರಮಾಚರಣೆ ಮಾಡಿದ್ದಾರೆ. ಅತ್ಯಾಚಾರ ಅಪರಾಧಿಗಳನ್ನು ಗಲ್ಲಿಗೇರಿಸದ್ದನ್ನು ಸಮರ್ಥಿಸಿ ನಗರದ ಶಿಡ್ಲಘಟ್ಟ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ, ಹಂತಕರ ಭಾವಚಿತ್ರ ಸುಟ್ಟು ಸಂಭ್ರಮಾಚರಣೆ ನಡೆಸಿದರು. ನಂತರ ನಿರ್ಭಯಾ ಆತ್ಮಕ್ಕೆ ಮೌನಾಚರಣೆ ಮೂಲಕ ಶಾಂತಿ ಕೋರಿ, ಇಂತಹ ಕೃತ್ಯಕ್ಕೆ ಕೈ ಹಾಕಿದರೆ ಅವರಿಗೆ ನಿರ್ಭಯವಾಗಿ ಗಲ್ಲು ವಿಧಿಸಬೇಕೆಂದು ಮನವಿ ಮಾಡಿದರು.