ಲಾಕ್ಡೌನ್ ಉಲ್ಲಂಘಿಸಿ ಮಸೀದಿಯಲ್ಲಿ ನಮಾಜ್... ಚಿಕ್ಕಮಗಳೂರಲ್ಲಿ ಮೂವರ ಬಂಧನ - ಚಿಕ್ಕಮಗಳೂರಿನಲ್ಲಿ ಕೊರೊನಾ
ಚಿಕ್ಕಮಗಳೂರು: ಲಾಕ್ಡೌನ್ ನಿಯಮ ಮೀರಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರೋಪದಡಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಬಾಳೆಹೊನ್ನೂರಿನ ಗೋರಿಗಂಡಿ ಮಸೀದಿಯಲ್ಲಿ ಹತ್ತಕ್ಕೂ ಹೆಚ್ಚು ಜನರು ಪ್ರಾರ್ಥನೆ ಮಾಡುತ್ತಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ ವೇಳೆ 10 ಕ್ಕೂ ಹೆಚ್ಚು ಮಂದಿ ಪರಾರಿಯಾಗಿದ್ದಾರೆ.ಇತ್ತ ಮಲೆನಾಡು ಭಾಗವಾದ ಕೊಪ್ಪದಲ್ಲೂ ಲಾಕ್ಡೌನ್ ಉಲ್ಲಂಘಿಸಿ ಬೈಕ್ ಸ್ಟಂಟ್ ಮಾಡಿದ್ದ ಯುವಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.