ಪಂಜಿನ ಕವಾಯತು ರಿಹರ್ಸಲ್...300ಕ್ಕೂ ಅಧಿಕ ಪೊಲೀಸರು,ವಿವಿಧ ಪಡೆಯ ವಿದ್ಯಾರ್ಥಿಗಳು ಭಾಗಿ - mysore news
ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆ,ವಿವಿಧ ಪಡೆಯ ವಿದ್ಯಾರ್ಥಿಗಳು ಹಾಗೂ ಪೊಲೀಸ್ ಸಿಬ್ಬಂದಿಯಿಂದ ಪಂಜಿನ ಕವಾಯತು ರಿಹರ್ಸಲ್ ನಡೆಯಸಲಾಯಿತು. ನಗರದ ಬನ್ನಿಮಂಪಟದ ಪಂಜಿನ ಕವಾಯತು ಮೈದಾನದಲ್ಲಿ 300 ಪೊಲೀಸ್ ಸಿಬ್ಬಂದಿ, ಎನ್ಸಿಸಿ, ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್, ಹೆರ್ವಿಂಗ್ ಸೇರಿದಂತೆ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕವಾಯತು ರಿಹರ್ಸಲ್ನಲ್ಲಿ ಪಾಲ್ಗೊಂಡಿದ್ದರು. ಡಮ್ಮಿ ಬುಲೆಟ್‌ಗಳನ್ನು ಬಳಸಿ ಪೊಲೀಸರು ತಾಲೀಮು ನಡೆಸಿದ್ರೆ,ವಿದ್ಯಾರ್ಥಿಗಳು ಪೊಲೀಸರು ಹೇಳಿದ ಮಾರ್ಗದಲ್ಲಿ ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದರು.