ಈಜುಕೊಳದಲ್ಲಿ ಮಹಿಳೆಯರೊಂದಿಗೆ ಮಸ್ತ್ ಸ್ಟೆಪ್ಸ್ ಹಾಕಿದ ದಾವಣಗೆರೆ ಪಾಲಿಕೆ ಸದಸ್ಯೆ!
ದಾವಣಗೆರೆ: ಬಿರು ಬೇಸಿಗೆಗೆ ಜನ ಬಸವಳಿದಿದ್ದಾರೆ. ಕೆಂಡದಂತಹ ಬಿಸಿಲಿಗೆ ರೋಸಿ ಹೋಗಿರುವ ಜನರು ನೀರಿನ ಮೊರೆ ಹೋಗಿದ್ದಾರೆ. ಹಾಗೆಯೇ ದಾವಣಗೆರೆ ಮಹಾನಗರ ಪಾಲಿಕೆಯ ಸದಸ್ಯೆ ಹಾಗೂ ಇತರೆ ಮಹಿಳೆಯರು ಬಿರು ಬಿಸಿಲಿಗೆ ಬೇಸತ್ತು ಈಜುಕೊಳದಲ್ಲಿ ಮಸ್ತ್ ಡಾನ್ಸ್ ಮಾಡಿದ್ದಾರೆ. ದಾವಣಗೆರೆ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಖಾಸಗಿ ಹೋಟಲ್ನಲ್ಲಿ ರಿದಮ್ ಡ್ಯಾನ್ಸ್ ಕ್ಲಾಸ್ ವತಿಯಿಂದ ಆಯೋಜನೆ ಮಾಡಿದ್ದ ವಾಟರ್ ಏರೋಬಿಕ್ಸ್ನಲ್ಲಿ ಪಾಲಿಕೆ ಸದಸ್ಯೆ ಶ್ವೇತಾ ಶ್ರೀನಿವಾಸ್ ಹಾಗೂ ಇತರೆ ಮಹಿಳೆಯರು ನೀರಿನಲ್ಲಿ ಹಿಂದಿ ಹಾಡುಗಳಿಗೆ ಮಸ್ತ್ ಸ್ಟೆಪ್ ಹಾಕಿ ಮಜಾ ಮಾಡಿದರು. ಖಾಸಗಿ ಹೋಟೆಲ್ನ ಸ್ವಿಮ್ಮಿಂಗ್ ಪೂಲ್ನಲ್ಲಿ ಸಖತ್ ಡ್ಯಾನ್ಸ್ ಮಾಡಿದ ಮಹಿಳೆಯರಿಗೆ ಪಾಲಿಕೆ ಸದಸ್ಯೆ ಶ್ವೇತಾ ಶ್ರೀನಿವಾಸ್ ಸಾಥ್ ನೀಡಿದರು. ಇನ್ನು ವಾಟರ್ ಏರೋಬಿಕ್ಸ್ಗೆ ಮಹಿಳೆಯರು ಫುಲ್ ಫಿದಾ ಆಗಿದ್ದು, ಬಿಸಿಲಿಗೆ ನೀರಿನಲ್ಲಿ ಇಳಿದು ಮಹಿಳೆಯರು ಲುಂಗಿ ಡ್ಯಾನ್ಸ್, ಕೆಜಿಎಫ್ ಸಾಂಗ್ ಸೇರಿದಂತೆ ಇತರೆ ಹಿಂದಿ ಗೀತೆಗಳಿಗೆ ಸಖತ್ ಡ್ಯಾನ್ಸ್ ಮಾಡಿದರು.