ಬಿಎಸ್ವೈ ಹುದ್ದೆಗೆ ಪ್ರತಿಯೊಬ್ಬರು ಬೆಲೆ ಕೊಡಬೇಕು : ಎಂ ಪಿ ಕುಮಾರಸ್ವಾಮಿ - Mudigere MLA MP Kumaraswamy talking about BSY
ಚಿಕ್ಕಮಗಳೂರು : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ವಯಸ್ಸಿಗೆ ಹಾಗೂ ಹುದ್ದೆಗೆ ಪಕ್ಷದ ಪ್ರತಿಯೊಬ್ಬರು ಬೆಲೆ ಕೊಡಬೇಕು ಎಂದು ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಹೇಳಿದರು. ಮಂತ್ರಿಯಾಗಲು ಅವಕಾಶ ಸಿಕ್ಕಿಲ್ಲವೆಂದು ಎಲ್ಲರಿಗೂ ನೋವಿದೆ. ಅಂದ ಮಾತ್ರಕ್ಕೆ ಖಾಸಗಿ ವಿಷಯಗಳ ಕುರಿತು ಮತ್ತು ಯಡಿಯೂರಪ್ಪನವರ ಬಗ್ಗೆ ಮಾತನಾಡಿದ್ರೆ ಪಕ್ಷದ ಬಗ್ಗೆ ಮಾತನಾಡಿದಂತೆ. ಹಾಗಾಗಿ, ಕೂಡಲೇ ಈ ರೀತಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.