ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಗೂಡ್ಸ್ ರೈಲಿನಲ್ಲಿ ಬಂದ ಶಾಸಕ - chief minister relief fund
ರಸ್ತೆ ಸಂಚಾರ ಸ್ಥಗಿತಗೊಂಡ ಕಾರಣ ಗದಗ ಶಾಸಕ ಎಚ್.ಕೆ.ಪಾಟೀಲ ಗೂಡ್ಸ್ ರೈಲಿನಲ್ಲಿ ಬಾಗಲಕೋಟಕ್ಕೆ ಆಗಮಿಸಿ ಅಚ್ಚರಿ ಮೂಡಿಸಿದ್ದಾರೆ. ಬಾಗಲಕೋಟೆ-ಗದಗ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಮುಳುಗಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಗದಗದ ಕೊಣ್ಣೂರಿನಲ್ಲಿ ಪ್ರವಾಹ ಪರಿಸ್ಥಿತಿ ಪರಿಶೀಲಿಸಿ ಎಚ್.ಕೆ.ಪಾಟೀಲ ಅವರು ಬಾಗಲಕೋಟದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕಿತ್ತು. ಶುಕ್ರವಾರ ಕೊಣ್ಣೂರಿನಲ್ಲಿ ರೈಲು ಹತ್ತಿದ ಶಾಸಕ ಬಾಗಲಕೋಟೆಗೆ ಬಂದಿಳಿದು ನೆರೆ ಪೀಡಿತ ಪ್ರದೇಶಗಳಿಗೆ ಪರಿಶೀಲನೆ ನಡೆಸಿದರು.