ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದವರಿಗೆ ಎರಡೇ ದಿನದಲ್ಲಿ ಖಾತೆ ಹಂಚಿಕೆ: ಸಿಎಂ - ಶನಿವಾರದೊಳಗಾಗಿ ನೂತನ ಸಚಿವರಿಗೆ ಖಾತೆ
ಬೆಂಗಳೂರು: ಶನಿವಾರದೊಳಗಾಗಿ ನೂತನ ಸಚಿವರಿಗೆ ಖಾತೆ ಹಾಗೂ ವಿಧಾನಸೌಧದಲ್ಲಿ ಕೊಠಡಿ ಹಂಚಲಾಗುತ್ತದೆ. ಸಾಧ್ಯವಾದ್ರೆ ಇನ್ನೊಮ್ಮೆ ದೆಹಲಿಗೆ ಹೋಗಿ ಬರುತ್ತೇನೆ. ಯಾವಾಗ ಹೋಗುತ್ತೇನೆ ಅನ್ನೋದನ್ನು ಇನ್ನೂ ತೀರ್ಮಾನಿಸಿಲ್ಲ. ಇನ್ನು, ಸಚಿವ ಸ್ಥಾನ ಸಿಗದೇ ಮುನಿಸಿಕೊಂಡಿರುವ ಉಮೇಶ್ ಕತ್ತಿ ಜೊತೆ ನಿನ್ನೆ ಮಾತನಾಡಿದ್ದೇನೆ. ಉಮೇಶ್ ಕತ್ತಿ ಅವರನ್ನು ಸಚಿವರಾಗಿ ಮಾಡೋದು ನೂರಕ್ಕೆ ನೂರರಷ್ಟು ಖಚಿತ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.