ಕಾರು ಬಿಟ್ಟು ವಾರ್ತಾ ಇಲಾಖೆ ವಾಹನದಲ್ಲಿ ಹಳ್ಳಿಗಳಿಗೆ ಸಂಚರಿಸಿದ ಸಚಿವ ಸುರೇಶ್ ಕುಮಾರ್ - ವಾರ್ತಾ ಇಲಾಖೆ ವಾಹನದಲ್ಲಿ ಸಂಚರಿಸಿದ ಸಚಿವ ಸುರೇಶ್ ಕುಮಾರ್
ಧಾರವಾಡ: ವಾರ್ತಾ ಇಲಾಖೆ ವಾಹನದಲ್ಲಿ ಸಚಿವ ಸುರೇಶ್ ಕುಮಾರ್ ಸಂಚಾರ ಮಾಡುವ ಮೂಲಕ ಗ್ರಾಮೀಣ ಭಾಗದ ವಿವಿಧ ಶಾಲೆಗಳಿಗೆ ಭೇಟಿ ನೀಡಿದರು. ಧಾರವಾಡ ಪ್ರವಾಸದ ವೇಳೆ ತಮ್ಮ ಕಾರ್ ಬಿಟ್ಟು ವಾರ್ತಾ ಇಲಾಖೆ ವಾಹನ ಏರಿದ ಸಚಿವ ಸುರೇಶ್ ಕುಮಾರ ಅವರು ಬಾಡ, ಸಲಕಿನಕೊಪ್ಪ ಭಾಗದಲ್ಲಿ ಸಂಚರಿಸಿದರು. ವಾರ್ತಾ ಇಲಾಖೆಯ ಸ್ವರಾಜ್ ಮಹೇಂದ್ರ ವಾಹನದಲ್ಲಿ ಸಚಿವರು ಓಡಾಡಿದರು.