ಮುಂಬೈನಿಂದ ಕಲಬುರಗಿಗೆ ವಲಸೆ ಕಾರ್ಮಿಕರ ಆಗಮನ: ರೈಲ್ವೆ ನಿಲ್ದಾಣದಲ್ಲಿಯೇ ಸ್ಕ್ರೀನಿಂಗ್ - Screening at Railway Station
ಕಲಬುರಗಿ: ಮುಂಬೈನಿಂದ ಮತ್ತೊಂದು ಶ್ರಮಿಕ್ ರೈಲು ಕಲಬುರಗಿಗೆ ಆಗಮಿಸಿದ್ದು, ಸಾವಿರಾರು ವಲಸೆಗರು ಜಿಲ್ಲೆಗೆ ಆಗಮಿಸಿದ್ದಾರೆ. ಲಾಕ್ಡೌನ್ ಕಾರಣದಿಂದ ಮುಂಬೈನಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರು ಇಂದು ಬೆಳಗಿನ ಜಾವ ನಗರದ ರೈಲು ನಿಲ್ದಾಣಕ್ಕೆ ಆಗಮಿಸಿದ್ದಾರೆ. ಸುಮಾರು 1200 ಜನ ಮುಂಬೈನಿಂದ ಆಗಮಿಸಿದ್ದು, ಅವರಿಗೆ ರೈಲ್ವೆ ನಿಲ್ದಾಣದಲ್ಲಿಯೇ ಸ್ಕ್ರೀನಿಂಗ್ ಮಾಡಲಾಗಿದೆ. ವೈದ್ಯಕೀಯ ತಪಾಸಣೆ ವೇಳೆ ಕೈಗೆ ಕ್ವಾರಂಟೈನ್ ಸೀಲ್ ಹಾಕಲಾಗಿದೆ. ಬಳಿಕ ಆಯಾ ತಾಲೂಕುಗಳ ಕ್ವಾರಂಟೈನ್ ಕೇಂದ್ರಗಳಿಗೆ ತೆರಳಲು ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಚಿಂಚೋಳಿ ಶಾಸಕ ಅವಿನಾಶ್ ಜಾಧವ್ ಈ ವೇಳೆ ಉಪಸ್ಥಿತರಿದ್ದರು.