ರಾಮನಾಮದೊಂದಿಗೆ ರಾಮಾಯಣ ಬರೆದ ಮಹಿಳೆ : ಪ್ರಧಾನಿಗೆ ಗಿಫ್ಟ್ ನೀಡೋ ಬಯಕೆ
ಲಖನೌ: ಉತ್ತರಪ್ರದೇಶದ ಮಹಿಳೆಯೊಬ್ಬರು ರಾಮನಾಮ್ ದೊಂದಿಗೆ ಇಡೀ ರಾಮಾಯಣವನ್ನು ಬರೆದಿದ್ದಾರೆ. ಈ ರಾಮನಾಮ್ ಬರಹವನ್ನ ಪ್ರಧಾನಿ ಮೋದಿ ಅವರಿಗೆ ಗಿಫ್ಟ್ ಕೊಡಲು ಅವರು ಬಯಸಿದ್ದಾರೆ. ಆಗಸ್ಟ್ 5 ರಂದು ಅಯೋಧ್ಯೆಯ ಭವ್ಯ ರಾಮ ಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಈ ನಿಮಿತ್ತ ಮಹಿಳೆ ರಾಮನಾಮ್ ಬರಹ ಉಡುಗೊರೆ ನೀಡಲು ಮುಂದಾಗಿದ್ದಾರೆ. ಅನುರಾಧಾ ಬನ್ಸಾಲ್ ಅವರು ಈ ವಿಶಿಷ್ಟ ರಾಮಾಯಣವನ್ನು 2012 ರಲ್ಲಿಯೇ ಪೂರ್ಣಗೊಳಿಸಿದ್ದಾರೆ. ದೊಡ್ಡ ದೊಡ್ಡ ಪದಗಳಿಂದ ಹಿಡಿದು ಪ್ರತಿಯೊಂದು ಉಚ್ಚಾರಾಂಶಕ್ಕೂ 'ರಾಮನಾಮ'ದ ಜಪ ಇದೆ. ಅಧ್ಯಾಯಗಳ ಜೊತೆ ಜೊತೆಗೆ ಅವರು ಚಿತ್ರಿಸಿದ ಚಿತ್ರಗಳೂ ಅವರ ಬರಹದಲ್ಲಿವೆ. ಗೋರಖ್ಪುರದವರಾಗಿರುವ ಅನುರಾಧಾ ಅವರು,"ತಾವು ಈ ರಾಮಾಯಣವನ್ನು ಪ್ರಧಾನಿ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಉಡುಗೊರೆಯಾಗಿ ನೀಡಲು ಬಯಸುತ್ತೇನೆ" ಎಂದು ಹೇಳಿದ್ದಾರೆ.