ಗಣೇಶ ಹಬ್ಬದ ನಿಮಿತ್ತ ವಿಭಿನ್ನ ಅಭಿನಯದ ಮೂಲಕ ನೆಟ್ಟಿಗರ ಮನ ಸೆಳೆದ ಮಾನಸಿ
ಉಡುಪಿ: ವಿಭಿನ್ನ ಶೈಲಿಯ ಹಾಡುಗಳ ಮೂಲಕ ಗಮನ ಸೆಳೆದಿರುವ ಕಲಾವಿದೆ ಮಾನಸಿ ಸುಧೀರ್ ಮತ್ತೊಮ್ಮೆ ವಿಶೇಷವಾಗಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ಕಥನ ಶೈಲಿಯಲ್ಲಿ ಅವರು ಹಾಡಿದ ಹಾಡು ಈಗ ಸಖತ್ ವೈರಲ್ ಆಗಿದೆ. ಕನ್ನಡ ವರ್ಣಮಾಲೆಯ ಸ್ವರಾಕ್ಷರಗಳನ್ನು ಇಟ್ಟುಕೊಂಡು ಗಣೇಶ ಹಬ್ಬದ ಸಂಭ್ರಮವನ್ನು ವಿವರಿಸಲಾಗಿದೆ. ದಿವಂಗತ ಮುಂಡಾಜೆ ರಾಮಚಂದ್ರ ಭಟ್ ಅವರು ಆರೇಳು ದಶಕಗಳ ಹಿಂದೆ ಬರೆದ ಈ ಶಿಶುಗೀತೆಗೆ ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಮರುಜೀವ ಬಂದಿದೆ.