ಅಪಘಾತದಲ್ಲಿ ಅಸುನೀಗಿದ ಶ್ವಾನಕ್ಕೆ ಅಂತ್ಯಸಂಸ್ಕಾರ ಮಾಡಿದ ಯುವಕ! - hubli latest news
ಅಪಘಾತದಲ್ಲಿ ಅಸುನೀಗಿದ ಶ್ವಾನದ ಕಳೆಬರವನ್ನು ಎತ್ತಿಕೊಂಡು ಹೋದ ಯುವಕ ಅಂತ್ಯಸಂಸ್ಕಾರ ಮಾಡಿದ್ದಾನೆ. ಹುಬ್ಬಳ್ಳಿಯ ಅಮರಗೋಳದಲ್ಲಿ ನಡೆದ ಕಾರು ಅಪಘಾತದಲ್ಲಿ ಶ್ವಾನವೊಂದು ಪ್ರಾಣ ಕಳೆದುಕೊಂಡು ರಸ್ತೆಯ ಪಕ್ಕದಲ್ಲಿ ಬಿದ್ದಿತ್ತು. ಅದನ್ನು ಗಮನಿಸಿದ ಸುನೀಲ ಎಂಬ ವ್ಯಕ್ತಿ ಕಳೆಬರವನ್ನು ಕೊಂಡೊಯ್ದು ಮನುಷ್ಯರ ರೀತಿಯಂತೆ ಅಂತಿಮ ಸಂಸ್ಕಾರ ಮಾಡಿದ್ದಾನೆ.