ಪ್ರತಿಭಟನೆ ಮಾಡೋರು ತಮ್ಮ ಬೆನ್ನ ಹಿಂದೆ ಏನು ನಡೆದಿದೆ ಅಂತ ತಿಳಿಯಲಿ: ಸವದಿ ತಿರುಗೇಟು - Laxman savadi taunt to women congress protest
ಸದನದಲ್ಲಿ ನೀಲಿ ಚಿತ್ರ ನೋಡಿದ ಕಳಂಕ ಹೊತ್ತವರನ್ನು ಡಿಸಿಎಂ ಮಾಡಿರುವುದಕ್ಕೆ ರಾಜ್ಯ ಬಿಜೆಪಿ ಕಚೇರಿ ಎದುರು ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಪ್ರತಿಭಟನೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಲಕ್ಷ್ಮಣ ಸವದಿ, ಪ್ರತಿಭಟನೆ ಮಾಡುವವರು ತಮ್ಮ ಬೆನ್ನ ಹಿಂದೆ ಏನು ನಡೆದಿದೆ ಅನ್ನೋದನ್ನು ತಿಳಿಯಲಿ. ಕಾಂಗ್ರೆಸ್ ಪಕ್ಷದಲ್ಲಿ ಏನೆಲ್ಲ ನಡೆದಿದೆ. ಎಂಥವರು ಇದ್ದಾರೆ ಅಂತಾ ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.