ಪಶು ಇಲಾಖೆಯಲ್ಲಿ ಅಧಿಕಾರಿಗಳ ಕೊರತೆ: ತುಕ್ಕು ಹಿಡಿಯುತ್ತಿವೆ ಇಲಾಖಾ ವಾಹನಗಳು - latest mysore news
ಮೈಸೂರು: ಸರಗೂರು ತಾಲ್ಲೂಕಿನ ಪಶು ಇಲಾಖೆಯಲ್ಲಿರುವ ವಾಹನಗಳು ನಿಂತ ಜಾಗದಲ್ಲಿಯೇ ತುಕ್ಕು ಹಿಡಿಯುತ್ತಿವೆ. ಇಲಾಖಾ ಸಿಬ್ಬಂದಿಗೆ ಸರ್ಕಾರ ಬೊಲೆರೊ ವಾಹನಗಳನ್ನು ನೀಡಿದೆ. ಆದರೆ, ಅಧಿಕಾರಿಗಳ ಕೊರತೆಯಿಂದಾಗಿ ವಾಹನಗಳು ಒಂದು ವರ್ಷದಿಂದ ವಾಹನಗಳು ಕೆಲಸಕ್ಕೆ ಬಾರದಾಗಿವೆ. ಇನ್ನೊಂದೆಡೆ,ಹಲವು ಇಲಾಖೆಗಳ ಸಿಬ್ಬಂದಿಗೆ ವಾಹನ ಸೌಲಭ್ಯಗಳ ಕೊರತೆಯಿದೆ. ಇಂಥ ಸಂದರ್ಭದಲ್ಲಿ ಸರ್ಕಾರಿ ವಾಹನಗಳನ್ನು ಸೂಕ್ತವಾಗಿ ಬಳಸದೆ ವ್ಯರ್ಥಗೊಳಿಸಲಾಗುತ್ತಿದೆ.