1610 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಶ್ಲಾಘನೀಯ: ಕುರುಬೂರು ಶಾಂತಕುಮಾರ್ - kurubur shantakumar news
ಲಾಕ್ಡೌನ್ ಸಂದರ್ಭದಲ್ಲಿ ಕೃಷಿಕರು,ನೇಕಾರರಿಗೆ,ಆಟೋ, ಟ್ಯಾಕ್ಸಿ ಚಾಲಕರಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿರುವುದಕ್ಕೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಶ್ಲಾಘಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲಾಕ್ಡೌನ್ನಿಂದ ಕೃಷಿಕರು ಹಾಗೂ ವಿವಿಧ ಅಸಂಘಟಿತ ವಲಯಗಳು ಕಾರ್ಮಿಕರು ಬದುಕು ಬೀದಿಗೆ ಬಂದಿತ್ತು. ಇಂತಹ ಸಂದರ್ಭದಲ್ಲಿ ಸರ್ಕಾರ ನೆರವಿಗೆ ಬಂದಿರುವುದು ಸಂತಸವಾಗಿದೆ ಎಂದರು.