ದಾವಣಗೆರೆ ತಲುಪಿದ ಕುರುಬ ಸಮುದಾಯದ ಪಾದಯಾತ್ರೆ
ದಾವಣಗೆರೆ: ಕಾಗಿನೆಲೆ ಕನಕ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀನಿರಂಜನಾನಂದ ಪುರಿ ಶ್ರೀಗಳು ಎಸ್ಟಿ ಮೀಸಲಾತಿಗಾಗಿ ಹಮ್ಮಿಕೊಂಡಿರುವ ಪಾದಯಾತ್ರೆ ದಾವಣಗೆರೆ ನಗರಕ್ಕೆ ಬಂದು ತಲುಪಿದೆ. ಕಳೆದ ಐದು ದಿನಗಳ ಹಿಂದೆ ಹಾವೇರಿ ಜಿಲ್ಲೆಯ ಕಾಗಿನೆಲೆಯಿಂದ ಎಸ್ಟಿ ಮೀಸಲಾತಿಗಾಗಿ ಯಾತ್ರೆ ಆರಂಭವಾಗಿದೆ. ನಂತರ ನಗರದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಸಮಾವೇಶದಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು.
TAGGED:
ಕುರುಬ ಸಮುದಾಯದ ಪಾದಯಾತ್ರೆ