ಶ್ರೀಕೃಷ್ಣನ ಅಲಂಕಾರ ತೊಟ್ಟು ಸಂಚರಿಸಿದ ಕೆಎಸ್ಆರ್ಟಿಸಿ ಬಸ್ - ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಕೆಎಸ್ಆರ್ಟಿಸಿ ಬಸ್
ದೇಶದೆಲ್ಲೆಡೆ ಬಹಳ ವಿಜೃಂಭಣೆಯಿಂದ ಶ್ರೀ ಕೃಷ್ಣನ ಜನ್ಮಾಷ್ಟಮಿಯನ್ನು ಆಚರಿಸುತ್ತಿದ್ದಾರೆ. ಆದರೆ ಚಿಂತಾಮಣಿ ನಗರದ ಕೆಎಸ್ಆರ್ಟಿಸಿ ಬಸ್ವೊಂದು ಶ್ರೀಕೃಷ್ಣನ ಅಲಂಕಾರ ತೊಟ್ಟು ಎಲ್ಲರ ಗಮನ ಸೆಳೆದಿದೆ. ಕೃಷ್ಣನ ಹುಟ್ಟಿನಿಂದ ಹಿಡಿದು ಮಹಾಭಾರತದ ಯುದ್ಧ ಸನ್ನಿವೇಶಗಳು, ಗೀತೋಪದೇಶಗಳನ್ನು ಸಾರುತ್ತಿರುವ ದೃಶ್ಯದ ಫ್ಲೆಕ್ಸ್ಗಳನ್ನು ಅಂಟಿಸಿಕೊಂಡು ನಗರದ ಮುಖ್ಯರಸ್ತೆಯಲ್ಲಿ ಸಂಚರಿಸಿ ಸಾರ್ವಜನಿಕರನ್ನು ಆಕರ್ಷಿಸಿದೆ. ಬಸ್ ಡಿಪೋನ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಸ್ವಂತ ಹಣದಲ್ಲಿ ಈ ರೀತಿ ಬಸ್ ಅನ್ನು ಅಲಂಕರಿಸಿದ್ದಾರೆ.