ಮತಗಟ್ಟೆಗೆ ಭದ್ರತೆ ನೀಡುವ ಮಂಗಳೂರು ಖಾಕಿ ಪಡೆಗೆ ಅಗತ್ಯ ವಸ್ತುಗಳ ಕಿಟ್ ಗಿಫ್ಟ್ - ಪೊಲೀಸ್ ಕಮೀಷನರ್
ಮಂಗಳೂರು: ಚುನಾವಣೆ ಕರ್ತವ್ಯಕ್ಕಾಗಿ ಪೊಲೀಸರು ಬೇರೆ ಬೇರೆ ಸ್ಥಳಗಳಿಗೆ ನಿಯೋಜಿಸಲ್ಪಡುತ್ತಾರೆ. ಚುನಾವಣೆಯ ಮೊದಲ ದಿನವೇ ಮತಗಟ್ಟೆಗೆ ತೆರಳಲಿರುವ ಪೊಲೀಸರಿಗೆ ಕೆಲವೊಂದು ಅಗತ್ಯ ವಸ್ತುಗಳು ಸಿಗುವುದಿಲ್ಲ. ಮತದಾನದ ದಿನ ಇಂತಹ ಸಂಕಷ್ಟಗಳನ್ನು ಅನುಭವಿಸುವ ಪೊಲೀಸರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಮಂಗಳೂರು ನಗರ ಪೊಲೀಸ್ ಇಲಾಖೆ ಕಿಟ್ ಕೊಡುಗೆಯಾಗಿ ನೀಡ್ತಿದೆ. ಒಂದು ಬಾಕ್ಸ್ನಲ್ಲಿ 2 ಪ್ಯಾಕೇಟ್ ಬಿಸ್ಕೆಟ್, 1 ಸೋಪ್, ಟೂತ್ ಬ್ರಷ್, ಟೂತ್ ಪೇಸ್ಟ್, ಒಡಮಸ್, ಶೇವಿಂಗ್ ಸೆಟ್, ಕ್ಯಾಂಡಲ್, ಬೆಂಕಿಪೊಟ್ಟಣ ಹಾಕಿ ನೀಡಲಾಗಿದೆ. ಮಂಗಳೂರು ಪೊಲೀಸ್ ಇಲಾಖೆಯಿಂದ ಚುನಾವಣಾ ಕರ್ತವ್ಯಕ್ಕೆ ತೆರಳುವ 1500 ಪೊಲೀಸರಿಗೆ ಕಿಟ್ ನೀಡಲಾಗುತ್ತೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.