ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಯೋಧರು: ಅಣ್ಣಾವ್ರ ಹಾಡಿಗೆ ಹೆಜ್ಜೆ ಹಾಕಿದ ಸೈನಿಕರು - ಕನ್ನಡ ಹಾಡಿಗೆ ಯೋಧರ ನೃತ್ಯ
ರಾಜ್ಯಾದ್ಯಂತ 64ನೇ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತಿದ್ದು, ಅದರಲ್ಲೂ ಬೆಳಗಾವಿ ಗಡಿಭಾಗದಲ್ಲಿ ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ನಮ್ಮ ಯೋಧರು ಕೂಡಾ ಕ್ಯಾಂಪಿನಲ್ಲಿ ಕನ್ನಡ ರಾಜ್ಯೋತ್ಸವನ್ನು ಆಚರಿಸಿದ್ದಾರೆ. ಇನ್ನು ಕರ್ನಾಟಕದ ಯೋಧರು ಡಾ.ರಾಜಕುಮಾರ್ ಅವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡಿಗೆ ಹೆಜ್ಜೆ ಹಾಕಿ ಕನ್ನಡ ಪ್ರೇಮವನ್ನು ಮೆರೆದಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದೆ.