ದಶಕದ ಪ್ರೀತಿಗೆ ಮದುವೆಯ ಮುದ್ರೆ: ಈ ಲವ್ ಬರ್ಡ್ಸ್ ಪೊಲೀಸ್ ಠಾಣೆಯಲ್ಲಿ ನಿಂತಿರೋದ್ಯಾಕೆ?
ಬಾಲ್ಯದಲ್ಲಿ ಚಿಗರೊಡೆದಿದ್ದ ಪ್ರೀತಿ ಅದು ಬೆಳೆದು ಹೆಮ್ಮರವಾಗಿದೆ. ಅದಕ್ಕಾಗಿ ಜೋಡಿಹಕ್ಕಿಗಳು ಮದುವೆ ಎಂಬ ಮುದ್ರೆ ಒತ್ತುವ ಮೂಲಕ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಇಷ್ಟೆಲ್ಲ ಆದ್ಮೇಲೆ ಈ ಯುವಜೋಡಿ ಖುಷಿ ಖುಷಿಯಾಗಿ ಇರಬೇಕಲ್ಲ ಅನ್ಕೊಂಡಿರಾ. ಇಲ್ಲ. ಹಾಗೇನು ಆಗಿಲ್ಲ ಕಣ್ರಿ. ಇವರ ಪ್ರೇಮವಿವಾಹಕ್ಕೆ ಮನೆಯವರಿಂದ ವಿರೋಧ ವ್ಯಕ್ತವಾಗಿದ್ದಕ್ಕೆ ಮನೆಯಲ್ಲಿರಬೇಕಿದ್ದ ಪ್ರೇಮಿಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.