ಶಿವಮೊಗ್ಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಶಿವಮೊಗ್ಗ ನಗರದ ಟ್ಯಾಂಕ್ ಮೊಹಲ್ಲಾದ ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ಎನ್. ಸರಸ್ವತಿ, ಹೆಣ್ಣು ಮಗು ಹುಟ್ಟುವುದೇ ಒಂದು ಭಾಗ್ಯ, ಪ್ರತಿ ಹೆಣ್ಣು ಮಗುವಿಗೆ ಪುರುಷನಂತೆ ಸಮಾನ ಕಾನೂನಾತ್ಮಕ ಹಕ್ಕಿದ್ದು, ತಾಯಿ ಗರ್ಭದಿಂದ ಅದು ಪ್ರಾರಂಭವಾಗುತ್ತದೆ. ಹೆಣ್ಣು ಗಂಡು ಎಂದು ಯಾವುದೇ ತಾರತಮ್ಯ ಮಾಡದೇ ಸಮಾನಾವಕಾಶ ಹೆಣ್ಣು ಮಗುವಿಗೂ ಕಲ್ಪಿಸಬೇಕೆಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಘೋಷಣೆ ಮಾಡಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.