ವೈದ್ಯಾಧಿಕಾರಿಯ ಕಾಳಜಿ, ಸುಧಾ ಮೂರ್ತಿ ಸಹಾಯ... ಭಟ್ಕಳ ಆಸ್ಪತ್ರೆಗೆ ಸಿಕ್ತು ಮುಕ್ತಿ - etv bharat
ಕಾರವಾರ: ಮಳೆ ಬಂದ್ರೆ ಸಾಕು, ಛಾವಣಿಯಿಂದ ನೀರು ಸೋರಿ ಆಸ್ಪತ್ರೆ ಕೆರೆಯಂತಾಗುತ್ತಿತ್ತು. ಇದರ ರಿಪೇರಿಗಾಗಿ ಸರ್ಕಾರದ ಅನುದಾನಕ್ಕೆ ಎಷ್ಟೇ ಕಾದು ಕುಳಿತ್ರೂ ಪ್ರಯೋಜನ ಮಾತ್ರ ಶೂನ್ಯವಾಗಿತ್ತು. ಆದ್ರೆ ಇಲ್ಲಿನ ವೈದ್ಯಾಧಿಕಾರಿ ಅನುದಾನದ ಬಗ್ಗೆ ಯೋಚ್ನೆ ಮಾಡ್ದೇ, ಸರ್ಕಾರದ ಸಹಾಯನೂ ಇಲ್ಲದೇ ಆಸ್ಪತ್ರೆ ದುರಸ್ತಿ ಕಾರ್ಯ ಮಾಡಿಸುತ್ತಿದ್ದಾರೆ. ಅದಕ್ಕೆ ಕೊಡುಗೈ ದಾನಿ ಸುಧಾ ಮೂರ್ತಿ ಅವರು ಸಹಾಯಧನ ನೀಡಿದ್ದು, ಆಸ್ಪತ್ರೆಯ ಸಮಸ್ಯೆಗೆ ಮುಕ್ತಿ ಸಿಕ್ಕಿದೆ...