ರೇವಣ್ಣ ಅವರನ್ನು ಕಸದ ಬುಟ್ಟಿಗೆ ಹಾಕಿದ್ದಾರೆ ಎಂದು ಕುಟುಕಿದ ಅನರ್ಹ ಶಾಸಕ
ಬೆನ್ನಿಗೆ ಚೂರಿ ಹಾಕಿದ ಅನರ್ಹರನ್ನು ದೇವೇಗೌಡರು ಕಸದ ಬುಟ್ಟಿಗೆ ಹಾಕಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅನರ್ಹ ಶಾಸಕ ನಾರಾಯಣಗೌಡ ನಾವು ಯಾವ ಜಾಗದಲ್ಲಿದ್ದೇವೋ ಜೆಡಿಎಸ್ ಕೂಡ ಅದೇ ಜಾಗದಲ್ಲಿದೆ. ಬಾಂಬೆಯಲ್ಲಿ ವ್ಯವಹಾರ ಮಾಡಿಕೊಂಡು ನನ್ನ ಪಾಡಿಗೆ ಇದ್ದೆ. ಆದರೆ, ಅಲ್ಲಿಂದ ನನ್ನನ್ನು ಕರೆದುಕೊಂಡು ಬಂದು ಚುನಾವಣೆಗೆ ನಿಲ್ಲಿಸಿದರು. ಅವರು ಕರೆಯದಿದ್ದರೆ ನಾನು ಯಾಕೆ ಅವರ ಪಕ್ಷಕ್ಕೆ ಹೋಗುತ್ತಿದ್ದೆ ಎಂದು ರೇವಣ್ಣ ಹೇಳಿಕೆಗೆ ತೀಕ್ಷ್ಣವಾಗಿ ತಿರುಗೇಟು ನೀಡಿದರು.