ಲಾಕ್ಡೌನ್ ಸಡಿಲಿಕೆ ಬಳಿಕ ಉಡುಪಿಯಲ್ಲಿ ಬಸ್ ಪ್ರಯಾಣದ ದರ ದುಪ್ಪಟ್ಟು!!
ಮುಂಬೈ ನಂಟಿನಿಂದ ಕೊರೊನಾ ಪ್ರಕರಣ ಹೆಚ್ಚಿಸಿಕೊಂಡ ಜಿಲ್ಲೆಯಲ್ಲಿ ಶೇ.25ರಷ್ಟು ಖಾಸಗಿ ಬಸ್ ಸಂಚಾರ ಆರಂಭವಾಗಿದೆ. ಆದರೆ, ಪ್ರಯಾಣದ ದರ ಕೂಡ ಹೆಚ್ಚಳವಾಗಿದೆ. ಇದು ಬಡ ಜನರಿಗೆ ನುಂಗಲಾಗದ ತುತ್ತಾಗಿದೆ. ಈ ಕುರಿತು ಖಾಸಗಿ ಬಸ್ಗಳ ಸಿಬ್ಬಂದಿ ಕೇಳಿದ್ರೆ, ಬಸ್‌ನಲ್ಲಿ ಕಡಿಮೆ ಸಂಖ್ಯೆ ಪ್ರಯಾಣಿಕರಿಗೆ ಅವಕಾಶ, ಸ್ಯಾನಿಟೈಸ್ ಮಾಡುವುದಕ್ಕೆ ಹಣ ಖರ್ಚಾಗುತ್ತಿದೆ ಎಂಬ ಉತ್ತರ ನೀಡ್ತಿದ್ದಾರೆ. ಆದರೆ, ಯಾವುದೇ ಮುಂಜಾಗ್ರತಾ ಕ್ರಮಕೈಗೊಂಡಿಲ್ಲ ಅಂತಾ ಪ್ರಯಾಣಿಕರು ಆರೋಪಿಸ್ತಿದ್ದಾರೆ.