ಬೆಸಿಗೆಯಲ್ಲಿ ಬಿಸಿಲಿನ ತಾಪಮಾನದಿಂದ ನಮ್ಮ ದೇಹವನ್ನು ಕಾಪಾಡಿಕೊಳ್ಳುವುದು ಹೇಗೆ?
ಬೇಸಿಗೆಕಾಲ ಬಂದ್ರೆ ಸಾಕು ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಹೆಚ್ಚಿನ ಬಿಸಿಲಿನ ತಾಪಮಾನದಿಂದ ಜನರು ತತ್ತರಿಸುತ್ತಾರೆ. ಆರು ಜಿಲ್ಲೆಗಳ ಪೈಕಿ ರಾಯಚೂರಲ್ಲಿ ಹೆಚ್ಚಾಗಿ ಬಿಸಿಲು ಕಂಡು ಬರುವುದರಿಂದ ನವಜಾತ ಶಿಶು ಹಾಗೂ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಕ್ಕಳ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ನಿರ್ಜಲೀಕರಣ, ಸನ್ ಸ್ಟ್ರೋಕ್ ಹಾಗೂ ಚರ್ಮ ರೋಗ ಬರುವ ಸಾಧ್ಯತೆಗಳಿವೆ.