ಅಭ್ಯರ್ಥಿಗಳ ಗೆಲುವಿಗಾಗಿ ಲಿಂಬೆ ಹಣ್ಣಿನ ಮೊರೆ ಹೋದ ಏಜೆಂಟ್
ಹೊಸಪೇಟೆ: ನಗರದ ಲಿಟಲ್ ಫ್ಲವರ್ ಶಾಲೆಯ ಮುಂಭಾಗದಲ್ಲಿ ಪೊಲೀಸರು ಚುನಾವಣಾ ಏಜೆಂಟ್ ಒಬ್ಬರನ್ನು ತಡೆದು ತಪಾಸಣೆ ಮಾಡುವ ವೇಳೆ ಅವರಲ್ಲಿ ಲಿಂಬೆಹಣ್ಣುಗಳು ಪತ್ತೆಯಾಗಿವೆ. ಇವರು ಅಭ್ಯರ್ಥಿ ಗೆಲುವಿಗಾಗಿ ಲಿಂಬೆ ಹಣ್ಣಿಗೆ ಮೊರೆ ಹೋಗಿದ್ದಾರೆ ಎನ್ನಲಾಗ್ತಿದೆ. ನಿಯಮದ ಪ್ರಕಾರ, ಮತ ಎಣಿಕೆಯ ಕೊಠಡಿಯೊಳಗೆ ಯಾವುದೇ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ.