ಧಾರಾಕಾರ ಮಳೆ: ತುಪ್ಪರಿ ಹಳ್ಳದ ತಾತ್ಕಾಲಿಕ ಸೇತುವೆ ಮುಳುಗಡೆ - ತುಪ್ಪರಿ ಹಳ್ಳದ ಸೇತುವೆ ಮುಳುಗಡೆ
ಧಾರವಾಡ : ನಿರಂತರವಾಗಿ ಎರಡು ದಿನಗಳ ಕಾಲ ಸುರಿದ ಮಳೆಯಿಂದ ತಾಲೂಕಿನ ಹಾರೋಬೆಳವಡಿ ಗ್ರಾಮದ ಬಳಿಯ ತುಪ್ಪರಿ ಹಳ್ಳದ ತಾತ್ಕಾಲಿಕ ಸೇತುವೆ ಮುಳುಗಡೆಯಾಗಿದೆ. ಕಳೆದ ವರ್ಷ ಆಗಸ್ಟ್ನಲ್ಲಿ ಮುಖ್ಯ ಸೇತುವೆ ಕೊಚ್ಚಿ ಹೋಗಿತ್ತು. ಸೇತುವೆ ದುರಸ್ತಿ ಕಾರ್ಯ ನಡೆಯುತ್ತಿದ್ದ ಹಿನ್ನೆಲೆ ಪಕ್ಕದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿತ್ತು. ಇದೀಗ ತಾತ್ಕಾಲಿಕ ಸೇತುವೆಯ ಮೇಲೆಯೂ ನೀರು ಹರಿಯುತ್ತಿದೆ. ಇದರಿಂದ ಸವದತ್ತಿ ರಸ್ತೆ ಸಂಚಾರ ಬಂದ್ ಆಗಿದೆ. ತುಪ್ಪರಿ ಹಳ್ಳದ ಅಪಕ್ಕದ ರೈತರ ಜಮೀನಿಗೂ ನೀರು ನುಗ್ಗಿದ್ದು, ಹೆಸರು, ಉದ್ದು, ಸೋಯಾಬಿನ್ ಬೆಳೆಗಳಿಗೆ ಹಾನಿಯಾಗಿದೆ.