ಅಥಣಿ ಪಟ್ಟಣದಲ್ಲಿ ಬಿರುಗಾಳಿ ಸಹಿತ ಮಳೆ.. ಅಂಗಡಿ ಮೇಲೆ ಬಿದ್ದಿತು ಬೃಹತ್ ಮರ - Athani Rain news
ಪಟ್ಟಣದಲ್ಲಿ ಭಾರೀ ಗಾಳಿ ಸಹಿತ ಮಳೆಯಾದ ಪರಿಣಾಮ ಬಸವೇಶ್ವರ ವೃತ್ತದ ಬಳಿ ಡಬ್ಬಾ ಅಂಗಡಿ ಹಾಗೂ ಕೆಲವು ದ್ವಿಚಕ್ರ ವಾಹನಗಳ ಮೇಲೆ ಮರ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಗಾಳಿ ಸಹಿತ ಮಳೆಯಿಂದಾಗಿ ಕೆಲಕಾಲ ಜನಜೀವನ ಅಸ್ತವ್ಯಸ್ತಗೊಂಡಿತ್ತು.