ಸಚಿವ ಸ್ಥಾನಕ್ಕಾಗಿ ಯಾವತ್ತೂ ಅಂಗಲಾಚಿಲ್ಲ, ಸಚಿವ ಸ್ಥಾನ ಕೊಡಿ ಅಂತ ಪದೇ ಪದೇ ಕೇಳಲ್ಲ : ಹೆಚ್. ವಿಶ್ವನಾಥ್ - vishwanath latest pressmeet
ಇಂದು ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸ ಧವಳಗಿರಿಗೆ ಹುಣಸೂರು ಮಾಜಿ ಶಾಸಕ ಹೆಚ್. ವಿಶ್ವನಾಥ್ ಭೇಟಿ ನೀಡಿದರು. ಬೆಳಗಾವಿ ಜಿಲ್ಲೆಯ ನಂದಗಡದಲ್ಲಿ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರಕ್ಕೆ ಹಣ ಬಿಡುಗಡೆ ಮಾಡುವಂತೆ ಕೇಳಲು ಅವರು ಆಗಮಿಸಿದ್ದರು. ಇದೆ ವೇಳೆ ಮಾಧ್ಯಮಗಳಿಗೆ ಮಾತನ್ನಾಡಿದ ಅವರು ಸಚಿವ ಸ್ಥಾನ ಕೊಡಿ ಅಂತ ನಾನು ಪದೇ ಪದೇ ಕೇಳಲ್ಲ. ಕೊಟ್ರೆ ಕೆಲಸ ಮಾಡ್ತೀನಿ, ಸಚಿವ ಸ್ಥಾನ ಕೊಡಲೇಬೇಕು ಕೊಟ್ಟೇ ಕೊಡ್ತಾರೆ. ನಾನು ಸಚಿವ ಸ್ಥಾನಕ್ಕಾಗಿ ಯಾವತ್ತೂ ಅಂಗಲಾಚಿಲ್ಲ, ಮಂತ್ರಿ ಸ್ಥಾನ ಕೊಟ್ರೆ ಕೆಲಸ ಮಾಡ್ತೀನಿ. ಆದ್ರೆ ಅದಕ್ಕಾಗಿ ಅಂಗಲಾಚಲ್ಲ ಎಂದು ಹೇಳಿದರು.
Last Updated : Feb 12, 2020, 12:09 PM IST