ಲಾಕ್ಡೌನ್ಗೆ ಹಾವೇರಿ ಜನರಿಂದ ಉತ್ತಮ ಸ್ಪಂದನೆ - ಕೊರೊನಾ ವೈರಸ್
ಹಾವೇರಿಯಲ್ಲಿ ಭಾರತ ಲಾಕ್ಡೌನ್ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿಗಳು ಮಾತ್ರ ಓಪನ್ ಆಗಿರೋದು ಬಿಟ್ರೆ ಬಹುತೇಕ ಅಂಗಡಿಗಳು ಬಂದ್ ಆಗಿವೆ. ತರಕಾರಿ ಮಾರಾಟ, ಅಗತ್ಯ ವಸ್ತುಗಳ ಖರೀದಿಗೆ ಓಡಾಡ್ತಿರೋರನ್ನ ಹೊರತುಪಡಿಸಿದರೆ, ಜನರ ಓಡಾಟ ತೀರಾ ವಿರಳವಾಗಿದೆ. ಅನಗತ್ಯವಾಗಿ ಮನೆಬಿಟ್ಟು ಹೊರಗೆ ಓಡಾಡುವವರಿಗೆ ಪೊಲೀಸ್ ಇಲಾಖೆ ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸೋ ಕೆಲಸ ಮಾಡ್ತಿದೆ.