ಪ್ರವಾಹ ಬಂದ್ಹೋದ್ರೇನು, ಗೌರಿ-ಗಣೇಶ ಹಬ್ಬ ಗದಗ್ನಲ್ಲಿ ಜೋರ್ದಾರು..
ಗದಗ ಜಿಲ್ಲೆಯ ಭೀಕರ ಪ್ರವಾಹದ ಪರಿಸ್ಥಿತಿಯ ಮಧ್ಯೆಯೂ ಸಾರ್ವಜನಿಕರು ಗೌರಿ-ಗಣೇಶ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ನಗರದ ಸ್ವಾಮಿ ವಿವೇಕಾನಂದ ಸಭಾ ಭವನದಲ್ಲಿ ಇರುವ ಮಳಿಗೆಗಳಿಂದ ಬಗೆಬಗೆಯ ಮೂರ್ತಿಗಳನ್ನು ತಮ್ಮ ಮನೆಗಳಲ್ಲಿ ಪ್ರತಿಷ್ಠಾಪಿಸಲು ಕೊಂಡೊಯ್ದಿದ್ದಾರೆ. ಆದರೆ, ಜಿಲ್ಲೆಯ ವಿವಿಧೆಡೆ ಈ ಬಾರಿ ಪ್ರವಾಹ ಉಂಟಾದ ಪರಿಣಾಮ ಗಣೇಶ ಮೂರ್ತಿಗಳ ಮಾರಾಟ ಅಲ್ಪಪ್ರಮಾಣದಲ್ಲಿ ಕಡಿಮೆಯಾಗಿದೆ.