ಗದಗ-ಬೆಟಗೇರಿ ಅವಳಿನಗರ ಸಂಪೂರ್ಣ ಸ್ತಬ್ಧ! - latest gadag lackdown news
ಭಾನುವಾರ ಲಾಕ್ಡೌನ್ ಹಿನ್ನೆಲೆ ಗದಗ-ಬೆಟಗೇರಿ ಅವಳಿ ನಗರ ಸಂಪೂರ್ಣ ಸ್ತಬ್ಧವಾಗಿದೆ. ನಗರದ ಪ್ರಮುಖ ಬೀದಿಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ. ಗಾಂಧಿ ಸರ್ಕಲ್, ಮಾರ್ಕೇಟ್, ಮುಳುಗುಂದ ನಾಕಾ, ಎಪಿಎಂಸಿ ಆವರಣ, ಹಳೆ ಡಿಸಿ ಆಫೀಸ್ ಸರ್ಕಲ್, ಹಾತಲಗೇರಿ ನಾಕಾ ಸೇರಿ ಹಲವು ಜನನಿಬಿಡ ಪ್ರದೇಶಗಳು ಖಾಲಿ ಖಾಲಿಯಾಗಿವೆ. ಆಟೋ, ಬಸ್ ಸಂಚಾರ, ಬೈಕ್ ಸವಾರರ ಓಡಾಟ ವಿಲ್ಲದೆ ರಸ್ತೆಗಳೆಲ್ಲ ಸೈಲೆಂಟ್ ಮೋಡ್‌ನಲ್ಲಿವೆ.