ಅನರ್ಹ ಶಾಸಕರ ವಿಚಾರ: ನನ್ನ ತೀರ್ಪಿನ ಬಗ್ಗೆ ನಾನೇನು ಹೇಳಲ್ಲ ಎಂದ ಮಾಜಿ ಸ್ಪೀಕರ್
ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು 17 ಶಾಸಕರನ್ನು ಅನರ್ಹಗೊಳಿಸಿ ಮಹತ್ವದ ತೀರ್ಮಾನವನ್ನು ಕೈಗೊಂಡಿದ್ದು, ಈ ವಿಷಯ ಈಗ ರಾಜ್ಯದಂತ್ಯ ಚರ್ಚೆಯಾಗುತ್ತಿದೆ. ಈ ಕುರಿತು ರಮೇಶ್ ಕುಮಾರ್ 'ಈಟಿವಿ ಭಾರತ'ದ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ನಾನೇನು ಹೇಳಲ್ಲ. ನನ್ನ ಕರ್ತವ್ಯವನ್ನು ನಾನು ಮಾಡಿದ್ದೀನಿ. ನನ್ನ ತೀರ್ಪಿನ ಬಗ್ಗೆ ನಾನೇನು ಹೇಳಲು ಬರುವುದಿಲ್ಲ. ಸುಪ್ರೀಂ ತೀರ್ಮಾನ ಬಂದ ನಂತರ ಮಾತನಾಡೋಣ ಎಂದರು. ಅಷ್ಟೇ ಅಲ್ಲದೇ ನೂತನವಾಗಿ ಆಯ್ಕೆಯಾಗಿರುವ ನೂತನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದರು.